top of page
About
About Story/ಕಥೆಯ ಬಗ್ಗೆ:
ಕಥೆಯ ಶೀರ್ಷಿಕೆ “ಮುನ್ನ” ಅಂದರೆ “ಮೊದಲು” ಎಂದರ್ಥ. ಉದಾ:- ನೀ ಬರುವ ಮುನ್ನ, ಮಳೆ ಬರುವ ಮುನ್ನ ಇತ್ಯಾದಿ.
*ಆರಂಭದಲ್ಲಿ->Before the Beginning” ಅದರರ್ಥ “ಆರಂಭದ ಮೊದಲು” ಅಂದರೆ “ಹೊಸತನಕ್ಕೆ ನಾಂದಿ” ಹಾಡುವ ಮೊದಲು ಎಂದರ್ಥ.
*ಕೊನೆಯಲ್ಲಿ-> The real Story begins Now... ಅಂದರೆ ಕಥೆಯಲ್ಲಿ ಬರುವ “ವಾಸ್ತವ ವಿಷಯಗಳನ್ನು” ಅರ್ಥಮಾಡಿಕೊಂಡವರು ಕಥೆಯ ಮುಂದುವರಿದ ಭಾಗ “ವಾಸ್ತವದಲ್ಲಿ ಹೇಗಿರಬೇಕು” ಎನ್ನುವುದನ್ನು ನಿರ್ಧಾರ ಮಾಡುತ್ತಾರೆ..
ನಮ್ಮ ಬಯಕೆ :
ಗೋ ಪೋಷಣೆ
[ಒಂದು ಪುಸ್ತಕ ಒಂದು ಕೆಜಿ ಪಶುಆಹಾರ]
ನಮ್ಮ ಪ್ರಪಂಚದಲ್ಲಿ ಎಷ್ಟೋ ಮನುಷ್ಯರು ಇಂದು ತಾಯಿಹಾಲು ಕುಡಿಯದೇ
ಜೀವಿಸಿರುವಂತ ಸನ್ನಿವೇಶ ಇರಬಹುದು. ಆದರೆ ಹಸುವಿನ ಹಾಲು ಕುಡಿಯದೇ ಇರುವವರು ಕೋಟಿಗೊಬ್ಬರು ಸಿಗುವುದು ಸಂಶಯ. ಹಸುವನ್ನು
ಕಲಿಯುಗದ ಕಾಮಧೇನು ಅಂತ ಕೂಡ ಕರೆಯುತ್ತಾರೆ. ಹಾಗಾಗಿ ನಾನು ಬರೆದಿರುವ ಪ್ರತೀ ಪುಸ್ತಕ ಮಾರಾಟವಾಗುವಾಗ, ಪ್ರತೀ ಒಂದು ಪುಸ್ತಕಕ್ಕೆ ಸರಿಯಾಗಿ ಒಂದು ಕೆಜಿ ಪಶುಆಹಾರವನ್ನು ಜಿಲ್ಲೆಯಲ್ಲಿರುವ ಗೋಶಾಲೆಯ ಹಸುಗಳಿಗೆ ನೀಡಬೇಕೆಂದು ಬಯಸಿದ್ದೇನೆ.
About
ವಿಶೇಷ ಕೊಡುಗೆ :
ವಿಶೇಷ ಕೊಡುಗೆಯ ಉದ್ಧೇಶದ ಕುರಿತು ಪುಸ್ತಕದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ನೀವು ಎರಡು ಪುಸ್ತಕವನ್ನು ಒಟ್ಟಿಗೆ ಆರ್ಡರ್ ಮಾಡಿದಾಗ ನಿಮಗೆ ಒಟ್ಟು ರೂ.100/- ಖಚಿತ ಡಿಸ್ಕೌಂಟ್ ಸಿಗುತ್ತದೆ. ಪುಸ್ತಕವನ್ನು ಆರ್ಡರ್ ಮಾಡಿ ನೀವು ಹೇಳಿದವರ ವಿಳಾಸಕ್ಕೆ ಪುಸ್ತಕವನ್ನು ನಾವೇ ತಲುಪಿಸುತ್ತೇವೆ. ನೀವು ಅವರಿಂದ ಪುಸ್ತಕದ ಗರಿಷ್ಠ ಮೊತ್ತವನ್ನು ಪಡೆದರಾಯ್ತು. ಇದರಿಂದಾಗಿ ತಾವು ಗಳಿಸುವುದರ ಜೊತೆಗೆ ಹೆಚ್ಚೆಚ್ಚು ಜನರು ಪುಸ್ತಕ ಓದಿದಂತಾಗುತ್ತದೆ ಹಾಗೂ ಗೋಶಾಲೆಗೆ ಹೆಚ್ಚೆಚ್ಚು ಪಶುಆಹಾರ ತಲುಪುವಂತಾಗುತ್ತದೆ.
bottom of page